ಜನುಮಗಳೇ ಕಾಯುವೆ | Janumagale Kaayuve 
Mocktail Movie Kannada Lyrics

Song Name : Janumagale Kaayuve Music : Raghu Dixit Lyricist : Raghavendra V Kamath Singer : Nakul Abhyankar

ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ
ಸಮಯದ ಕೊನೆಯಲಿ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ
ಮನಸಿನ ಕಿಡಿಗೆ
ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ

ಮರೆತು ಹೋಗದೆ ನನ್ನ
ಮನ್ನಿಸು ಎಂದಿದೆ ಮನ
ಸನಿಹ ನನ್ನ ಕಾಣದೆ ನಿನ್ನ
ನೆನಪು ನಿನ್ನದೇ ದಿನ
ಶೂನ್ಯವೇ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು
ಕನಸೇ ನೀನು ಕ್ಷಮಿಸಲೇನು
ಒಂದೊಮ್ಮೆ ಎದುರು ನಿಲ್ಲು

ಸೊರಗಿದೆ ಜೀವನ
ಸಾಯದೆ ಪ್ರತಿ ಕ್ಷಣ
ಯಾವುದೀ ಬಂಧನ ಬಿಡಿಸು ಬಾ
ಕಾಣಳುವ ಕಂಪನ
ತಾಳದೆ ಹೊಡೆಣ
ಕಾಡದೇ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ

Post a Comment