ಚಿತ್ರ : ರೋಮಿಯೋ
ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಕವಿರಾಜ್
******************
Aalochane Aaradhane-Lyrics in Kannada
ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರು ಒಂದಾದರೆ ಕಂಡಿತ
ಈ ಜೀವನ ಅಲ್ಲಿಂದಲೆ ಅದ್ಭುತ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!
ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ಮನುಜನೊ ಗಾಂಧಾರನೊ
ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡಲಾರದಂತೆ ???
ಹುಡುಗಿಯ ಈಗೆ ಹೆದರಿಸ ಬೇಡಾ ಕಣೊ
ಅಂದು ನೀನು ಆಗಂತುಕ
ಇಂದು ನೀನೆ ನನ್ನಾ ಸಖ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!
ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆ ತಡೆ ಇನ್ನು ತಡೆಯನು ನಾ ನನ್ನನು
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೊಕಿ ಆದ ಹಾಗೆ ????
ಬೆವರುವೆ ಯಾಕೊ ಅರಳುವೆ ನಾನೇತಕೊ
ಹೇಳೊ ಆಸೆ ಆಲಿಂಗನ
ಯಾಕೊ ನಾಚಿ ನೀರಾದೆ ನಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!
@@@@@@@@@@@@@@
0 Comments: