Sri-lakshmi-as...Sri Lakshmi Ashtottara Shatanamavali


ನಿಮಗೆತಿಳಿದಿರಲಿ
ಒಮ್ಮೆ ದುರ್ವಾಸ ಋಷಿಗಳು ಇಂದ್ರನನ್ನು ನೋಡಲು ಇಂದ್ರ ಲೋಕಕ್ಚೆ ಹೋಗುತ್ತಾರೆ. ಆ ಸಮಯದಲ್ಲಿ ಇಂದ್ರನು ಎಲ್ಲಿಗೊ ಹೊರಡುವ ಅವಸರದಲ್ಲಿ ಇರುತ್ತಾನೆ.ದುರ್ವಾಸರು ಇಂದ್ರನಿಗೆ ಒಂದು ಪಾರಿಜಾತ ಹೂವಿನ ಹಾರವನ್ನು ಕೊಡುತ್ತಾರೆ.

ಆಗ ಇಂದ್ರನು ದುರ್ವಾಸರು ಕೊಟ್ಟ ಹಾರವನ್ನು ತೆಗದು ಕೊಂಢು ಅದನ್ನು ಐರಾವತ ಆನೆಯ ತಲೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ನೆಲದ ಮೇಲೆ ಹಾಕಿ ಕಾಲಿನಿಂದ ಹೊಸಕಿ ಹಾಕುತ್ತದೆ . ಇದನ್ನು ನೋಡಿದ ದುರ್ವಾಸರಿಗೆ ಅವಮಾನವದಂತಾಗಿ ಕೋಪಗೊಂಡು, ನೀನು ಧನ ಮದದಿಂದ ಈ ರೀತಿ ವರ್ತಿಸುತ್ತಿರುವೆ. ಶೀಘ್ರದಲ್ಲಿ ನಿನ್ನ ಐಶ್ವರ್ಯವೆಲ್ಲ ನಾಶವಾಗಿ ದರಿದ್ರ ನಾಗುವೆ ಎಂದು ಶಾಪ ಕೊಢುತ್ತಾರೆ.

ಸ್ವರ್ಗಲೋಕವೆಲ್ಲ ದಾರಿದ್ರ್ಯ ಉಂಟಾಗುತ್ತದೆ. ಎಲ್ಲಿಯೂ ಲಕ್ಷ್ಮೀ ಇರುವುದಿಲ್ಲ. ಇದೇ ಮುಂದೆ ಸಮುದ್ರ ಮಂಥನಕ್ಕೆ ಕಾರಣವಾಗುತ್ತದೆ.

ಸಮುದ್ರ ಮಂಥನ ಕಾಲದಲ್ಲಿ ಹಲವಾರು ವಸ್ತುಗಳು ಸಮುದ್ರದಿಂದ ಉದ್ಬವಿಸುತ್ತವೆ.  ಅದರಲ್ಲಿ  ಉದ್ಭವಿಸಿದವರು  ದರಿದ್ರಲಕ್ಷೀ , ಮತ್ತು ಮಹಾಲಕ್ಷ್ಮೀ....
ಮಹಾಲಕ್ಷೀಯನ್ನು  ಶ್ರೀಮನ್ನಾರಾಯಣನು ಪತ್ನಿ ಯಾಗಿ ಸ್ವೀಕರಿಸಿದ , ದರಿದ್ರ ಲಕ್ಷೀ ಯನ್ನು ಯಾರೂ ಸ್ವೀಕರಿಸಲಿಲ್ಲ ಅಷ್ಟೇ ಅಲ್ಲ ಅವಳಿಗೆ ನೆಲೆಸಲು ಎಲ್ಲಿಯೂ  ಒಳ್ಳೆಯ ಕಡೆಗೆ ಜಾಗ ಸಿಗುವುದಿಲ್ಲ .... ದಾರಿದ್ರ್ಯ ರಿಂದ ಕೂಡಿದ ಅಶುಚಿತ್ವದಲ್ಲಿ ಅವಳು ನೆಲೆಸುತ್ತಾರೆ... ಸ್ನೇಹಿತರೇ ಇದನ್ನು ನಿಮಗೆ ಯಾಕೆ ಹೇಳ್ತಾ ಇದ್ದೇನೆ ಅಂದರೆ  ನೀವು ಬರೀ ಪೂಜೆ ಮಾಡಿದರೆ ಮಾತ್ರ ದೇವರು ಲಕ್ಷ್ಮೀ ಒಲೆಯುತ್ತಾಳೆ ಅಂದುಕೊಂಡಿದ್ದರೆ ಸುಳ್ಳದು , ಎಲ್ಲಿ ಶುಚಿತ್ವ ಇರುತ್ತೊ ಅಲ್ಲಿ ದೇವರು ವಾಸವಾಗಿರುತ್ತಾನೆ ಲಕ್ಷ್ಮೀ ಇರ್ತಾಳೆ , ಅದಕ್ಕೆ ಮನೆಯನ್ನು ಯಾವಾಗಲೂ ಶುಚಿಯಾಗಿಟ್ಟು ಕೊಳ್ಳಬೇಕು , ಮೂಲೆಮೂಲೆಗಳಲ್ಲಿ ಕಸವಿರಬಾರದು, ಮನೆಯಲ್ಲಿ ಸದಾ ಜಗಳವಿರಬಾರದು ,ಜಗಳವಿದ್ದರೆ ಲಕ್ಷ್ಮೀ ತಲೆಗೆ ತ್ರಾಸ ಆಗುತ್ತಂತೆ ಇಲ್ಲಿ ನಾನು ನಿಲ್ಲಲ್ಲ ಅಂತ ಅನ್ನುತ್ತಾಳೆ...ಒಗೆದ ಬಟ್ಟೆಗಳನ್ನು ಧರಿಸಬೇಕು , ಮನೆಯಲ್ಲಿ ಜೇಡರಬಲೆ ಕಟ್ಟದಂತೆ ನೋಡಿಕೊಳ್ಳಬೇಕು ಮುಸುರೆ ಮೈಲಿಗೆ ಪಾಲಿಸಬೇಕು.... ಇಷ್ಟು ಪಾಲಿಸಿ ನಿಮ್ಮ ಮನೆಗೆ ದಾರಿದ್ರ್ಯ ಲಕ್ಷ್ಮೀ ಕಾಲೇ ಹಾಕಲ್ಲ... ನೀವು ಭಾರೀ ಶ್ರೀಮಂತರಾಗಬೆಕೆಂದಿಲ್ಲ  ಇದ್ದದ್ದರಲ್ಲೇ ಸುಂದರ ಬದುಕು ನೆಮ್ಮದಿ ಬದುಕು ನಿಮ್ಮದಾಗುತ್ತದೆ....

#ಅಷ್ಟಲಕ್ಷ್ಮೀಸ್ತೋತ್ರ

ಆದಿಲಕ್ಷ್ಮೀ
ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ |
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ || 1 ||

ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ |
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ || 2 ||

ಧೈರ್ಯಲಕ್ಷ್ಮಿ
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ |
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ || 3 ||

ಗಜಲಕ್ಷ್ಮಿ
ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ |
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || 4 ||

ಸಂತಾನಲಕ್ಷ್ಮಿ
ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ |
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ || 5 ||

ವಿಜಯಲಕ್ಷ್ಮಿ
ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ |
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ || 6 ||

ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ |
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || 7 ||

ಧನಲಕ್ಷ್ಮಿ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ |
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ || 8 ||

#ಫಲಶೃತಿ
ಶ್ಲೋ|| ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ||

ಶ್ಲೋ|| ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ |
ಹಿನ್ಯೈ ಮಂಗಳಂ ಶುಭ ಮಂಗಳಂ ||

         @@@@@@@@@@@@@@

Post a Comment