Film - Panchatantra
Song - Panchatantra Title Song
Lyrics - Jayant Kaikini
Singer - Prem
Music - V Harikrishna
Director - Yogaraj Bhat
ಅಲಲಲಲಲಲಲಲ
ಆಮೆ ಮೊಲ ಓಡ್ಲಾ ಓಡ್ಲಾ ಓಡ್ಲಾ
ಉಟ್ಟ ಪಂಚೆಯನ್ನು ಬಿಚ್ಚಿ ಪೇಟ ಸುತ್ತಿಕೊಂಡು
ಚಿಮ್ಮಿ ಚಿಮ್ಮಿ ಓಡೋ ಮೊಲ
ಓ ಓ ಹತ್ತಿ ಚೆಂಡು
ಭಾರವಾದ ಚಿಪ್ಪಿನಿಂದ ಮೂತಿ ಎತ್ತಿಕೊಂಡು
ಠೀವಿ ಇಂದ ಹೊಂಟಿತಲ್ಲ
ಆಹಾ ಆಮೆ ಯೊಂದು
ಓಟವಂತೆ ಇಬ್ರಿಗೂನು
ನೋಟವುಂಟು ಎಲ್ರಿಗೂನು
ನೋಡೋಣಂತೆ ಮಿತ್ರ
ಇದೆ ಪಂಚತಂತ್ರ
ಮಜಾ ಪಂಚತಂತ್ರ
ಇದೆ ಪಂಚತಂತ್ರ
ಮಜಾ ಪಂಚತಂತ್ರ
ಊರಿಗೊಂದು ದಾರಿಯಾದ್ರೆ ಪೋರಂಗೊಂದು ದಾರಿ
ಓಡುವಾಗ ನೋಡಬೇಡ ಹಿಂದೆ ಬಾರಿ ಬಾರಿ
ಮೇಲು ಕೀಳು ಅಂದುಕೊಂಡ್ರೆ ವ್ಯರ್ಥ ನಿನ್ನ ಯಾನ
ದಾರಿಯಲ್ಲೇ ಸಂಕ ಬಿದ್ರೆ ಅಲ್ಲೇ ಮಾಡು ಸ್ನಾನ
ಕಣ್ಣ ಪಟ್ಟಿ ಕಟ್ಟಿಕೊಂಡು ನಂಟನ್ನೆಲ್ಲ ಬಿಟ್ಟುಕೊಂಡು
ಆಗಬೇಡ ಯಂತ್ರ
ಇದೆ ಪಂಚತಂತ್ರ
ಓಹೋ ಪಂಚತಂತ್ರ
ಇದೆ ಪಂಚತಂತ್ರ
ನಮ್ಮ ಪಂಚತಂತ್ರ
ತಂತ್ರ ತಂತ್ರ ತಂತ್ರ
ಎಲ್ಲ ಜೀವದಲ್ಲೂ ಉಂಟು ಗೆಲ್ಲುವಾಸೆ ನೂರು
ಯಾಕೆ ಗೆಲ್ಲಬೇಕು ಅಂತ ಹೇಳೋರಿಲ್ಲ ಯಾರು
ಸಪ್ಪೆ ಗಂಜಿ ಬಾಳಿನಲ್ಲಿ ಉಪ್ಪಿನಂತೆ ಪ್ರೀತಿ
ಹಂಚಿಕೊಂಡರೇನೇ ಹಬ್ಬ ಹಮ್ಮು ಗಿಮ್ಮು ದಾಟಿ
ಹೇ ಗೆಲ್ಲಬಲ್ಲೆ ಹೃದಯವನ್ನು ನಿತ್ಯ ಬಾಳ ಸಮರವನ್ನು
ಮಮತೆಯಿಂದ ಮಾತ್ರ
ಇದೆ ಪಂಚತಂತ್ರ
ಮಜಾ ಪಂಚತಂತ್ರ
ಇದೆ ಪಂಚತಂತ್ರ
ಮಜಾ ಪಂಚತಂತ್ರ
0 Comments: