Nanna Mele Nanageega Lyrics - Kannadakkaagi Ondannu Otti - ನನ್ನ ಮೇಲೆ ನನಗೀಗ ಅನುಮಾನ.
ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ: ಅರ್ಜುನ್ ಜನ್ಯ
ಗಾಯನ: ಸೋನು ನಿಗಮ್
Movie: Kannadakkaagi Ondannu Otti
Singer: Sonu Nigam
Music: Arjun Janya
Lyrics: Yogaraj Bhat
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...
ಬಡಪಾಯಿ ಎದೆಯಲ್ಲಿ ಒಲವಿಗ ಮನೆ ಮಾಡಿದೆ...
ಸನ್ನೆಯಲ್ಲಿ ಇನ್ನೇನು ಹೇಳುವಾಗ,ಎಲ್ಲ ಮಾತು, ನನ್ನಲಿ ಬಾಕಿ ಈಗ...ಸರಿ ಹೋಗುವ ಮುನ್ಸೂಚನೆ....
ಇತ್ತೀಚಿಗೆ ಸುಳಿದಾಡಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...
ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ ಏಕಾಂತವೀಗ ನನ್ನ ಕಾಡಿದೆ.
ಒಂದೇ ಒಂದು ಮಾತು ನೀ ಚಂದವಾಗಿ ಆಡಿ ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ...
ಉಸಿರಿನ ಬಿಸಿಯು ತಗುಲಿದ ಮೇಲೆ ಹುಡುಗನ ಪಾಡು ಹೀಗಾಗಿದೆ...
ಪದ ಗೀಚುವ ಬೆರಳೆಲ್ಲವು ಪದವಿಲ್ಲದೆ ಪರದಾಡಿದೆ.
ಇನ್ನೆಕೇ ಕಾಲಹರಣ ದೂರಾನೇ ತುಂಬಾ ಕಠಿಣ ಕಣ್ಣಲ್ಲೇ ನೀಡು ಎಲ್ಲಾ ಸೂಚನೆ.
ಎಲ್ಲೇ ಹೋದರೂನು ನೀ ಎಲ್ಲೇ ಬಂದರುನು.
ನನಗೀಗ ನಿನ್ನದೊಂದೇ ಪ್ರಾರ್ಥನೆ.
ಜೀವದ ಭಾಷೆ ಹೇಳಲು ನನಗೆ ಜೀವವೇ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ...
ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್.
@@@@@@@@@@@@@@
0 Comments: