ಶ್ಲೋಕ ೧
ಧೃತರಾಷ್ಟ್ರ ಉವಾಚ
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||
*********
ಧೃತರಾಷ್ಟ್ರನು ಹೇಳಿದನು "ಹೇ ಸಂಜಯನೆ, ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು?"
-----------------------------------------------
ಶ್ಲೋಕ ೨
ಸಂಜಯ ಉವಾಚ
ದೃಷ್ಟ್ವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ|
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ||
********
ಸಂಜಯನು ಹೇಳಿದನು "ಆಗ ರಾಜ ದುರ್ಯೋಧನನು ಪಾಂಡವರ ಸೈನ್ಯವನ್ನು ವೀಕ್ಷಿಸಿ ತನ್ನ ಆಚಾರ್ಯನ ಬಳಿಗೆ ಹೋಗಿ ಮಾತನಾಡಿದನು"
-----------------------------------------------------
ಶ್ಲೋಕ ೩
ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್ |
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ||
***********
ನೋಡಿದಿರಾ ಆಚಾರ್ಯರೆ, ಪಾಂಡು ಪುತ್ರರ ಈ ವ್ಯೂಹ ರೂಪವಾದ ಸೈನ್ಯವನ್ನು ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನ ಕೌಶಲದಿಂದ ಸಜ್ಜುಗೊಂಡಿದೆ.
--------------------------------------------------
ಶ್ಲೋಕ ೪
ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನ ಸಮಾಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ||
**********
ಹೋರಾಟದಲ್ಲಿ ಭೀಮಾರ್ಜುನರಿಗೆ ಸಮಾನರಾದ ಅನೇಕ ವೀರರು, ಹಿರಿಯ ಬಿಲ್ಗಾರರು ಈ ಸೈನ್ಯದಲ್ಲಿದ್ದಾರೆ. ಯುಯುಧಾನ, ವಿರಾಟ ಮತ್ತು ದ್ರುಪದರಂತಹ ಮಹಾರಥಿಗಳಿದ್ದಾರೆ
--------------------------------------------------
ಶ್ಲೋಕ ೫
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ |
ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ||
**********
ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ, ಕುಂತಿಭೋಜ ಮತ್ತು ಶೈಬ್ಯರಂತಹ ಗಂಡುಗಲಿಗಳಿದ್ದಾರೆ (ನರಪುಂಗವರಿದ್ದಾರೆ)
-------------------------------------------------
ಶ್ಲೋಕ ೬
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ |
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ||
*********
ಬಲಶಾಲಿಯಾದ ಯುಧಾಮನು, ಶಕ್ತಿವಂತ ಉತ್ತಮೌಜನು, ಸುಭದ್ರೆಯ ಮಗ ಮತ್ತು ದ್ರೌಪದಿಯ ಮಕ್ಕಳು ಇವರೆಲ್ಲರೂ ಇದ್ದಾರೆ.
--------------------------------------------------
ಶ್ಲೋಕ ೭
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ |
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ||
**********
ಬ್ರಾಹ್ಮಣೋತ್ತಮನೇ ನಿಮ್ಮ ಸನ್ನೆಗೆಂದು ನಮ್ಮ ಕಡೆಯಿರುವ ನಾಯಕರು, ಹೆಚ್ಚಾಳುಗಳು ಅವರ ಬಗ್ಗೆ ಹೇಳಬಯಸುತ್ತೇನೆ.
------------------------------------------------------
ಶ್ಲೋಕ ೮
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ |
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ||
**********
ಪೂಜ್ಯರಾದ ನೀವು, ಭೀಷ್ಮರು, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ ಇವರೆಲ್ಲರೂ ಸದಾ ಯುದ್ಧದಲ್ಲಿ ವಿಜಯಸಾಧಿಸುವವರು.
----------------------------------------------
ಶ್ಲೋಕ ೯
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ |
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ||
**********
ಇನ್ನೂ ಅನೇಕ ಶೂರರು ನನಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ. ಎಲ್ಲರೂ ಬಗೆಬಗೆಯ ಆಯುಧಗಳಿಂದ ಹೋರಾಡಬಲ್ಲವರು, ಯುದ್ಧದಲ್ಲಿ ಪಳಗಿದವರು.
-----------------------------------------------------------
ಶ್ಲೋಕ ೧೦
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ |
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ ||
*********
ತಾತ ಭೀಷ್ಮರಿಂದ ಸಜ್ಜಾದ ನಮ್ಮ ಸೇನೆಯು ಅಳತೆಯನ್ನು ಮೀರಿದ್ದು. ಭೀಮನಿಂದ ಸಜ್ಜಾದ ಅವರ ಸೇನೆಯು ಸೀಮಿತವಾದುದು.
-----------------------------------------------------------
ಶ್ಲೋಕ ೧೧
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ |
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ||
**********
ಸೈನ್ಯವ್ಯೂಹದ ಆಯಕಟ್ಟಿನ ಬಿಂದುಗಳಲ್ಲಿ ನೀವೆಲ್ಲರೂ ಸರಿಯಾಗಿ ಹಂಚಿಕೊಂಡು ಭೀಷ್ಮರಿಗೆ ಸಂಪೂರ್ಣ ಬೆಂಬಲ ನೀಡಬೇಕು.
-----------------------------------------------------------
ಶ್ಲೋಕ ೧೨
ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ||
**********
ಅವನಿಗೆ ಸಂತಸ ತರಲು, ಪ್ರತಾಪಶಾಲಿಯಾದ ಮತ್ತು ಕುರುಕುಲ ಪಿತಾಮಹರಾದ ಭೀಷ್ಮರು ಗಟ್ಟಿಯಾಗಿ ಸಿಂಹನಾದಗೈದು ಶಂಖವನ್ನೂದಿದರು.
-----------------------------------------------------------
ಶ್ಲೋಕ ೧೩
ತತಃ ಶಂಖಾಶ್ಚ ಭೇರ್ಯಶ್ಚ
ಪಣವಾನಕಗೋಮುಖಾಃ |
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋ„ಭವತ್ ||
**********
ನಂತರ ಶಂಖಗಳು, ನಗಾರಿಗಳು, ತಮಟೆ, ಢೋಲು, ಗೋಮುಖ ಮುಂತಾದ ವಾದ್ಯಗಳು ಒಟ್ಟಿಗೆ ಮೊಳಗಿದವು, ಆ ಸದ್ದು ಕೇಳಲು ಭಯಂಕರವಾಗಿತ್ತು.
-----------------------------------------------------------
ಶ್ಲೋಕ ೧೪
ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ||
**********
ನಂತರ ಬಿಳಿಯ ಕುದುರೆಗಳಿಂದ ಸಜ್ಜಾದ ಮಹಾರಥದಲ್ಲಿದ್ದ ಶ್ರೀಕೃಷ್ಣನೂ ಅರ್ಜುನನೂ ತಮ್ಮ ದಿವ್ಯವಾದ ಶಂಖಗಳನ್ನು ಊದಿದರು.
-----------------------------------------------------------
ಶ್ಲೋಕ ೧೫
ಪಾಂಚಜನ್ಯಂ ಹೃಷೀಕೇಶೋ
ದೇವದತ್ತಂ ಧನಂಜಯಃ |
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ||
**********
ಕೃಷ್ಣನು ತನ್ನ ಪಾಂಚಜನ್ಯವನ್ನು, ಅರ್ಜುನನು ದೇವದತ್ತವನ್ನು, ವೃಕೋದರನು ಮತ್ತು ಸಾಹಸಗಳನ್ನು ಮಾಡುವ ಭೀಮಸೇನನು ಪೌಂಡ್ರವೆಂಬ ಮಹಾ ಶಂಖವನ್ನು ಊದಿದರು.
-----------------------------------------------------------
ಶ್ಲೋಕ ೧೬
ಅನಂತವಿಜಯಂ ರಾಜಾ
ಕುಂತೀಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ||
**********
ಕುಂತಿಪುತ್ರನಾದ ರಾಜ ಯುಧಿಷ್ಠಿರನು ಅನಂತವಿಜಯವೆಂಬ ಶಂಖವನ್ನು, ನಕುಲ ಮತ್ತು ಸಹದೇವರು ಸುಘೋಷ ಮತ್ತು ಮಣಿಪುಷ್ಪಕ ಶಂಖಗಳನ್ನು ಊದಿದರು.
-----------------------------------------------------------
ಶ್ಲೋಕ ೧೭
ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ |
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ||
**********
ಮಹಾಧನುರ್ಧಾರಿಯಾದ ಕಾಶಿರಾಜ, ಮಹಾರಥನಾದ ಶಿಖಂಡೀ, ಧೃಷ್ಟದ್ಯುಮ್ನ, ವಿರಾಟ, ಅಜೇಯನಾದ ಸಾತ್ಯಕಿ...
-----------------------------------------------------------
ಶ್ಲೋಕ ೧೮
ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ |
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ||
**********
...ದ್ರುಪದ, ದ್ರೌಪದಿಯ ಮಕ್ಕಳು, ಮಹಾಬಾಹುವೂ ಸುಭದ್ರೆಯ ಮಗನಾದ ಅಭಿಮನ್ಯು, ಎಲ್ಲರೂ ತಮ್ಮ ಶಂಖಗಳನ್ನು ಊದಿದರು.
-----------------------------------------------------------
ಶ್ಲೋಕ ೧೯
ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ||
**********
ಆ ಸದ್ದು, ಅಬ್ಬರ ನೆಲ ಮುಗಿಲುಗಳಲ್ಲಿ ಪ್ರತಿಧ್ವನಿಸಿ ಕೌರವರ (ಧೃತರಾಷ್ಟ್ರನ ಮಕ್ಕಳ) ಎದೆಗಳನ್ನು ಚೂರು ಚೂರು ಮಾಡಿತು.
-----------------------------------------------------------
ಶ್ಲೋಕ ೨೦
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ |
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ||
**********
ಹನುಮನ ಧ್ವಜವಿರುವ ಅರ್ಜುನನು ಯುದ್ಧಕ್ಕೆ ಸಜ್ಜಾಗಿರುವ ಕೌರವರನ್ನು ಕಂಡು ತನ್ನ ಧನುಸ್ಸನ್ನು ಎತ್ತಿ ಹಿಡಿದು...
-----------------------------------------------------------
ಶ್ಲೋಕ ೨೧
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ |
ಅರ್ಜುನ ಉವಾಚ
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ„ಚ್ಯುತ ||
**********
...ಕೃಷ್ಣನನ್ನು ಕುರಿತು ಹೀಗೆ ಹೇಳಿದನು "ಅಚ್ಯುತನೇ, ಎರಡು ಸೈನ್ಯಗಳ ನಡುವೆ ನನ್ನ ರಥವನ್ನು ನಿಲ್ಲಿಸು"
-----------------------------------------------------------
ಶ್ಲೋಕ ೨೨
ಯಾವದೇತಾನ್ನಿರೀಕ್ಷೇ„ಹಂ ಯೋದ್ಧುಕಾಮಾನವಸ್ಥಿತಾನ್ |
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ರಣಸಮುದ್ಯಮೇ ||
**********
ಈ ಯುದ್ಧ ಮಾಡಲು ಸನ್ನದ್ಧರಾಗಿರುವ ಇವರನ್ನು ಮತ್ತು ನಾನು ಯಾರ ಜೊತೆ ಯುದ್ಧ ಮಾಡಬೇಕೆಂದು ನೋಡ ಬಯಸುತ್ತೇನೆ.
-----------------------------------------------------------
ಶ್ಲೋಕ ೨೩
ಯೋತ್ಸ್ಯಮಾನಾನವೇಕ್ಷೇ„ಹಂ ಯ ಏತೇ„ತ್ರ ಸಮಾಗತಾಃ |
ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಯುದ್ಧೇ ಪ್ರಿಯಚಿಕೀರ್ಷವಃ ||
**********
ದುರ್ಬುದ್ಧಿಯವನಾದ ದುರ್ಯೋಧನನ್ನು (ಧೃತರಾಷ್ಟ್ರನ ಮಗನನ್ನು) ಸುಪ್ರೀತಗೊಳಿಸಲು ಬಯಸಿ ಯುದ್ಧ ಮಾಡಲು ಇಲ್ಲಿ ನೆರೆದವರನ್ನು ನಾನು ನೋಡ ಬಯಸುತ್ತೇನೆ.
-----------------------------------------------------------
ಶ್ಲೋಕ ೨೪
ಸಂಜಯ ಉವಾಚ
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ |
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಂ ||
**********
ಸಂಜಯನು ಹೇಳಿದನು "ಭರತವಂಶಜನೇ ಅರ್ಜುನನ ಈ ಮಾತುಗಳನ್ನು ಕೇಳಿ ಕೃಷ್ಣನು ಆ ಮಹಾರಥವನ್ನು ಎರಡು ಸೈನ್ಯಗಳ ನಡುವೆ ನಿಲ್ಲಿಸಿದ.
-----------------------------------------------------------
ಶ್ಲೋಕ ೨೫
ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಂ |
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||
**********
ಭೀಷ್ಮ, ದ್ರೋಣ, ಮತ್ತಿತರ ಪ್ರಮುಖ ರಾಜರ ಎದುರು ನಿಲ್ಲಿಸಿ ಕೃಷ್ಣನು ಹೇಳಿದನು "ಪಾರ್ಥ, ಇಲ್ಲಿ ನೆರೆದಿರುವ ಕೌರವರನ್ನು ನೋಡು".
-----------------------------------------------------------
ಶ್ಲೋಕ ೨೬
ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತñನಥ ಪಿತಾಮಹಾನ್ |
ಆಚಾರ್ಯಾನ್ ಮಾತುಲಾನ್ ಭ್ರಾತಾನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ||
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ |
**********
ಅಲ್ಲಿ ನೆರೆದವರಲ್ಲಿ ಅರ್ಜುನನು ಚಿಕ್ಕಪ್ಪ, ದೊಡ್ಡಪ್ಪಂದಿರನ್ನು, ತಾತಂದಿರನ್ನು, ಗುರುಗಳನ್ನು, ಸೋದರ ಮಾವಂದಿರನ್ನು, ಸೋದರರನ್ನು, ಗೆಳೆಯರನ್ನು, ಮಕ್ಕಳನ್ನು, ಮೊಮ್ಮಕ್ಕಳನ್ನು ನೋಡಿದನು...
-----------------------------------------------------------
ಶ್ಲೋಕ ೨೭
ತಾನ್ ಸಮೀಕ್ಷ್ಯ ಸ ಕೌಂತೇಯ: ಸರ್ವಾನ್ ಬಂಧೂನ್ ಅವಸ್ಥಿತಾನ್ ||
ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ |
**********
ಕುಂತಿಯ ಮಗ ಅರ್ಜುನನು ಕಂಡು ಎರಡೂ ಸೈನ್ಯದಲ್ಲಿ ಬಂಧುಗಳಿರುವುದನ್ನು ನೋಡಿ...
-----------------------------------------------------------
ಶ್ಲೋಕ ೨೮
ಅರ್ಜುನ ಉವಾಚ
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಂ ||
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ |
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ||
**********
...ಭಾವಪರವಶನಾಗಿ ಅರ್ಜುನನು ಹೀಗೆ ಹೇಳಿದನು "ಕೃಷ್ಣ, ಯುದ್ಧ ಮಾಡಲು ಬಯಸಿ ಬಂದವರೆಲ್ಲರೂ ನಮ್ಮವರೇ"
ನನ್ನ ಅಂಗಾಂಗಳು ಕಂಪಿಸುತ್ತಿವೆ, ಬಾಯಿ ಒಣಗುತ್ತಿದೆ, ಕೂದಲು ನವಿರೆದ್ದು ನಡುಗುತ್ತಿದೆ.
-----------------------------------------------------------
ಶ್ಲೋಕ ೨೯
ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ |
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ||
**********
ಗಾಂಡೀವವು ನನ್ನ ಕೈಯಿಂದ ಜಾರುತ್ತಿದೆ, ಚರ್ಮವು ಉರಿಯುತ್ತಿದೆ, ನಿಲ್ಲಲೂ ಆಗುತ್ತಿಲ್ಲ, ಮನಸ್ಸು ಸುತ್ತುತ್ತಿದೆ.
-----------------------------------------------------------
ಶ್ಲೋಕ ೩೦
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ |
ನ ಚ ಶ್ರೇಯೋ„ನುಪಶ್ಯಾಮಿ ಹತ್ವಾ ಸ್ವಜನಮಾಹವೇ ||
**********
...ಅಶುಭ ಸೂಚಕ ಶಕುನಗಳೇ ಕಾಣುತ್ತಿವೆ. ನಮ್ಮ ಬಂಧುಗಳನ್ನೇ ಯುದ್ಧದಲ್ಲಿ ಕೊಲ್ಲುವುದರಿಂದ ನನಗೆ ಯಾವ ಶ್ರೇಯಸ್ಸೂ ಕಾಣುತ್ತಿಲ್ಲ.
-----------------------------------------------------------
ಶ್ಲೋಕ ೩೧
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯ ಸುಖಾನಿ ಚ |
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ||
**********
ಕೃಷ್ಣ, ನಾನು ಗೆಲುವನ್ನಾಗಲಿ, ರಾಜ್ಯದ ಸುಖವನ್ನಾಗಲಿ ಬಯಸುವುದಿಲ್ಲ. ಅಂತಹ ರಾಜ್ಯದಿಂದ, ಭೋಗಗಳಿಂದ, ಬದುಕಿಯೂ ಏನು ಪ್ರಯೋಜನ?
-----------------------------------------------------------
ಶ್ಲೋಕ ೩೨
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ |
ತ ಇಮೇ„ವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ||
**********
ಯಾರಿಗಾಗಿ ರಾಜ್ಯದ, ಭೋಗಗಳ, ಸುಖವು ಬೇಕೋ? ಅವರೇ ಪ್ರಾಣವನ್ನೂ ಹಣವನ್ನೂ ತೊರೆಯಲು ಸಿದ್ಧರಾಗಿ ನಮ್ಮ ವಿರುದ್ಧ ಯುದ್ಧ ಮಾಡಲು ನಿಂತಿದ್ದಾರೆ.
-----------------------------------------------------------
ಶ್ಲೋಕ ೩೩
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ |
ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ ||
**********
ಆಚಾರ್ಯರು, ತಂದೆ ಸಮಾನರು, ಮಕ್ಕಳು, ತಾತಂದಿರು, ಸೋದರ ಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವ-ಮೈದುನರು, ಇತರ ಬಂಧುಗಳು...
-----------------------------------------------------------
ಶ್ಲೋಕ ೩೪
ಏತಾನ್ನ ಹಂತುಮಿಚ್ಛಾಮಿ ಘ್ನತೋ„ಪಿ ಮಧುಸೂದನ |
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ||
**********
...ಓ ಮಧುಸೂದನ, ಈ ಭೂಮಿಯ ಒಡೆತನವಿರಲಿ, ಮೂರು ಲೋಕಗಳ ಅಧಿಪತ್ಯ ಸಿಕ್ಕರೂ, ಇವರೆಲ್ಲರೂ ನನ್ನನ್ನು ಕೊಲ್ಲಲು ಬಂದರೂ, ನಾನಿವರನ್ನು ಕೊಲ್ಲಲಾರೆ.
-----------------------------------------------------------
ಶ್ಲೋಕ ೩೫
ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ |
ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ||
**********
ಜನಾರ್ದನ, ಧಾರ್ತರಾಷ್ಟ್ರರನ್ನು (ಕೌರವರನ್ನು) ಕೊಂದು ನಮಗೇನು ಸುಖ? ಇಂತಹ ಮಹಾಪಾತಕರನ್ನು ಕೊಂದರೆ ನಮಗೆ ಪಾಪ ಬರುವುದಿಲ್ಲವೇ?
-----------------------------------------------------------
ಶ್ಲೋಕ ೩೬
ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸಬಾಂಧವಾನ್ |
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ||
**********
ಆದ್ದರಿಂದ ನಮ್ಮ ಬಂಧುಗಳಾದ ಧಾರ್ತರಾಷ್ಟ್ರರನ್ನು ನಾವು ಹತ್ಯೆಗಯ್ಯುವುದು ಸರಿಯಲ್ಲ. ಮಾಧವ! ನಮ್ಮವರನ್ನೇ ಕೊಂದು ನಾವು ಹೇಗೆ ಸುಖವಾಗಿರಲು ಸಾಧ್ಯ?
-----------------------------------------------------------
ಶ್ಲೋಕ ೩೭
ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ |
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಂ ||
**********
ಈ ಜನರ ಹೃದಯಗಳು ದುರಾಸೆಗೆ ವಶವಾಗಿ, ಕುಲದ ಅಳಿವು, ಮಿತ್ರದ್ರೋಹ ಇದಾವುದರಲ್ಲೂ ಅವರಿಗೆ ದೋಶ ಕಾಣುತ್ತಿಲ್ಲ.
-----------------------------------------------------------
ಶ್ಲೋಕ ೩೮
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಂ |
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ||
**********
ಆದರೆ ಜನಾರ್ದನ! ಕುಲ ಕ್ಷಯವನ್ನು ಮಾಡುವುದು ಪಾಪವೆಂದು ತಿಳಿದ ನಮಗೆ ಈ ಪಾಪಕಾರ್ಯದಿಂದ ದೂರವಿರಬೇಕೆಂಬ ಅರಿವು ಇಲ್ಲದಿದ್ದರೆ ಹೇಗೆ?
-----------------------------------------------------------
ಶ್ಲೋಕ ೩೯
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ |
ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋಭಿಭವತ್ಯುತ ||
**********
ಕುಲದ ಕ್ಷಯವಾದರೆ ಸನಾತನವಾದ ಕುಲ ಧರ್ಮವು ನಾಶ ಹೊಂದುತ್ತದೆ. ಧರ್ಮವು ನಷ್ಟವಾದರೆ ಉಳಿದ ಕುಟುಂಬಗಳು ಅಧರ್ಮದ ವಶವಾಗುತ್ತದೆ.
-----------------------------------------------------------
ಶ್ಲೋಕ ೪೦
ಅಧರ್ಮಾಭಿಭವಾತ್ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ |
ಸ್ತ್ರೀಷು ದುಷ್ಟಾಸು ವಾಷ್ರ್ಣೇಯ ಜಾಯತೇ ವರ್ಣಸಂಕರಃ ||
**********
ಕೃಷ್ಣ! ಕುಟುಂಬವು ಅಧರ್ಮದ ವಶವಾದರೆ, ಕುಲದ ಹೆಣ್ಣು ಮಕ್ಕಳು ನೀತಿ ಭ್ರಷ್ಟರಾಗಿ ಅನಿಷ್ಟ ಸಂತಾನ ಸೃಷ್ಟಿಯಾಗುತ್ತದೆ.
-----------------------------------------------------------
ಶ್ಲೋಕ ೪೧
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ |
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ||
**********
ಅನಿಷ್ಟ ಜನರೂ, ಕುಲಗೇಡಿಗಳೂ ಹೆಚ್ಚಾಗಿ ಕುಲವನ್ನು ನರಕಸದೃಶಗೊಳಿಸುವರು. ಇಂತಹ ಜನರ ಪೂರ್ವಿಕರು ಪಿಂಡ ತರ್ಪಣಗಳಿಲ್ಲದೆ ಪತನ ಹೊಂದುವರು.
-----------------------------------------------------------
ಶ್ಲೋಕ ೪೨
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ |
ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ||
**********
ಕುಟುಂಬದ ಸಂಪ್ರದಾಯವನ್ನು ನಾಶ ಮಾಡಿ ಅನಿಷ್ಟ ಸಂತಾನವನ್ನು ಸೃಷ್ಟಿಸುವವರ ದುಷ್ಕರ್ಮದಿಂದ ಎಲ್ಲ ಸಮಾಜ-ಸಮುದಾಯದ ಯೋಜನೆಗಳು, ಕುಲದ ಕಲ್ಯಾಣ ಚಟುವಟಿಕೆಗಳು ನಾಶವಾಗುತ್ತದೆ.
-----------------------------------------------------------
ಶ್ಲೋಕ ೪೩
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ |
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ||
**********
ಜನಾರ್ದನ! ಕುಲ ಧರ್ಮದ ನಾಶವನ್ನು ಮಾಡುವ ಜನರಿಗೆ ನರಕ ವಾಸವಾಗುವುದೆಂದು ಕೇಳಿ ತಿಳಿದಿದ್ದೇನೆ.
-----------------------------------------------------------
ಶ್ಲೋಕ ೪೪
ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಂ |
ಯದ್ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ||
**********
ಅಯ್ಯೋ! ಎಂತಹ ಮಹಾ ಪಾಪವನ್ನು ಮಾಡಲು ಸಿದ್ಧತೆ ಮಾಡುತ್ತಿದ್ದೇವೆ? ರಾಜ್ಯ ಸುಖದ ದುರಾಸೆಯಿಂದ, ನಮ್ಮವರನ್ನೇ ಕೊಲ್ಲಲು ಸಂಕಲ್ಪ ಮಾಡಿದ್ದೇವಲ್ಲ?
-----------------------------------------------------------
ಶ್ಲೋಕ ೪೫
ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಯಃ |
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ||
**********
ಒಂದು ವೇಳೆ, ಪ್ರತೀಕಾರ ಮಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಶಸ್ತ್ರ ಹಿಡಿದು ಯುದ್ಧದಲ್ಲಿ ನನ್ನನ್ನು ಕೊಂದರೆ ಅದು ನನ್ನ ಭಾಗ್ಯವೇ.
-----------------------------------------------------------
ಶ್ಲೋಕ ೪೬
ಸಂಜಯ ಉವಾಚಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ |
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ||
**********
ಸಂಜಯನು ಹೇಳಿದನು "ರಣಭೂಮಿಯಲ್ಲಿ ಅರ್ಜುನನು ಹೀಗೆ ಹೇಳಿ, ತನ್ನ ಬಿಲ್ಲು ಬಾಣಗಳನ್ನು ಬದಿಗಿಟ್ಟು, ದುಃಖದಿಂದ, ರಥದಲ್ಲಿ ಕುಸಿದು ಬಿಟ್ಟನು"
--------------------------------------------------------
ಅಧ್ಯಾಯ ಒಂದು ಮುಕ್ತಾಯ
-----------------------------------------------------------
Tags:bhagavad geeta in kannada
bhagavath geetha in kannada
bhagwat geeta in kannada
bhagavad gita in kannada book
bhagavath geetha in kannada book
bhagwat geetha
Post a Comment